ಇಕ್ಟೈನಸ್
-ಪ್ರಾಚೀನ ಗ್ರೀಸಿನ ಒಬ್ಬ ಶಿಲ್ಪಿ. ಕ್ರಿ. ಪೂ. ಐದನೆಯ ಶತಮಾನದಲ್ಲಿದ್ದ. ಫಿಡಿಯಾಸ್ ಮತ್ತು ಪೆರಿಕ್ಲೀಸರ ಸಮಕಾಲೀನ (ನೋಡಿ- ಫಿಡಿಯಸ್), (ನೋಡಿ- ಪೆರಿಕ್ಲೀಸ್) ಅಥೆನ್ಸ್ ನಗರದ ಅಕ್ರೊಪೊಲಿಸ್ ಮೇಲಿದ್ದ ಪಾರ್ಥೆನಾನ್ ಮಂದಿರ ಇವನ ಮತ್ತು ಕ್ಯಾಲಿಕ್ರಟೀಸ್‍ನ ಕಲ್ಪನೆ ಮತ್ತು ರಚನೆ. ಆರ್ಕೇಡಿಯಾದ ಬಸ್ಸೇ ಎಂಬಲ್ಲಿರುವ ಭವ್ಯ ಅಪೊಲೊ ಮಂದಿರವೂ ಈತನ ರಚನೆ. ಎಲ್ಯೂಸಿಸ್‍ನಲ್ಲಿ ಆಗಿನ ಪವಾಡನಾಟಕಗಳ ಪ್ರದರ್ಶನ ನಡೆಯುತ್ತಿದ್ದ ಡಿಮೀಟರ್ ಮತ್ತು ಪರ್ಸಿಫೊನೆ ಮಂದಿರವೂ ಇವನ ಕೃತಿಗಳು. ಆಗ ಪ್ರಚಾರದಲ್ಲಿದ್ದ ಡೋರಿಕ್ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಿ ಈಗಲೂ ಈ ಮಂದಿರಗಳ ಅವಶೇಷಗಳಿವೆ. ಕರ್ನಾಟಕದ ಜಕಣಾಚಾರಿಯಂತೆ ಈತನ ವಿಷಯವಾಗಿಯೂ ಜನಜನಿತವಾದ ಅನೇಕ ವದಂತಿಗಳಿವೆ. 				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ